ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಜೀವನಚರಿತ್ರೆ | ಗಂಧದಗುಡಿ

ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಜೀವನಚರಿತ್ರೆ | ಗಂಧದಗುಡಿ

ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಜೀವನಚರಿತ್ರೆ | ಗಂಧದಗುಡಿ

ಕರ್ನಾಟಕ ರತ್ನ ಪುರಸ್ಕೃತ ಪುನೀತ್ ರಾಜ್ ಕುಮಾರ್ ಒಬ್ಬ ಅತ್ಯದ್ಭುತ ನಟ ಹಾಗು ಹಿನ್ನೆಲೆ ಗಾಯಕನೂ ಸಹ ಹೌದು. ಚಿಕ್ಕ ವಯಸ್ಸಿನಿಂದಲೇ ತನ್ನ ಅತ್ಯಂತ ಅದ್ಭುತ  ನಟನೆ ಇಂದ ಎಲ್ಲರ ಮನವನ್ನು ಗೆದ್ದಂತಹ ಸೌಮ್ಯ ಸ್ವಭಾವದ ಎಲ್ಲರ ಅಚ್ಚುಮೆಚ್ಚಿನ ನಟ ಪುನೀತ್ ರಾಜ್ ಕುಮಾರ್. 

ಪುನೀತ್ ರಾಜಕುಮಾರ್ ರವರನ್ನು ಅಪ್ಪು, ಪವರ್‌ಸ್ಟಾರ್ ಎಂಬ ಅಡ್ಡಹೆಸರುಗಳಿಂದ ಅಭಿಮಾನಿಗಳು ಕರೆಯುತ್ತಾರೆ. ಕನ್ನಡ ಚಿತ್ರರಂಗದಲ್ಲಿ ತನ್ನ ಉತ್ತಮವಾದ ನಟನೆಯಿಂದ ಮಿಂಚಿ ಇಂದು ಈ  ಪ್ರಮುಖ ನಟ ನಮ್ಮನೆಲ್ಲ ಅಗಲಿದ್ದಾರೆ.

ಬರಿಯ ಚಿತ್ರರಂಗದಲ್ಲೇ ಅಲ್ಲದೆ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಅಂದರೆ ಸಮಾಜದ ಒಳಿತಿಗಾಗಿ ತಮ್ಮನ್ನು ಮುಡಿಪಾಗಿಟ್ಟು ಎಲ್ಲರ ಮನಸ್ಸನ್ನು ಗೆದ್ದ ಪ್ರಮುಖ ನಟ ನಮ್ಮ ಪುನೀತ್ ರಾಜ್ ಕುಮಾರ್. ಇವರು ಅನೇಕ ಅನಾಥಾಶ್ರಮ  ಹಾಗು ವೃದ್ಧಶ್ರಮಗಳನ್ನು ನಡೆಸಿ ಜನರ ಬಾಳಿಗೆ ದಾರಿದೀಪವಾಗಿ, ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. 

ಪುನೀತ್ ರಾಜಕುಮಾರ್ ಅವರ ಮೊದಲ ಹೆಸರೇನು?

ಮಾರ್ಚ್ 17 -1975 ರಲ್ಲಿ ಜನಿಸಿದ ಪುನೀತ್ ರಾಜಕುಮಾರ್ ಅವರನ್ನು ಡಾಕ್ಟರ್ ರಾಜಕುಮಾರ್ ಅವರ ತಾಯಿ ಲಕ್ಷ್ಮಮ್ಮ ಅವರು ಅಪ್ಪು ಎಂದು ಕರೆಯುತ್ತಿದ್ದರು. ಪುನೀತ್ ಅವರ ಅಜ್ಜಿ ಇಟ್ಟಂತಹ ಅಪ್ಪು ಎಂಬ ಹೆಸರು ಎಲ್ಲರಿಗೂ ತುಂಬಾ ಇಷ್ಟವಾಯಿತು. ಆದರೆ ಪುನೀತ್ ರವರಿಗೆ ನಾಮಕರಣ ಮಾಡಿದ್ದು ಬೇರೆ ಹೆಸರಿನಲ್ಲಿ. ಹತ್ತು ವರ್ಷಗಳವರೆಗೆ ಅಂದರೆ ಸಾವಿರ 1975 ರಿಂದ 1985 ವರೆಗೆ ಪುನೀತ್ ರವರ ಹೆಸರು ಬೇರೆಯೇ ಆಗಿತ್ತು.

ಪುನೀತ್ ರಾಜಕುಮಾರ್ ಅವರು ಹುಟ್ಟಿದಾಗ ಅವರಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿದ ಹೆಸರು ಲೋಹಿತ್ ಎಂದು. ಆದರೆ 1985 ರಲ್ಲಿ ಡಾಕ್ಟರ್ ರಾಜಕುಮಾರ್ ರವರು ಅವರ ಹೆಸರನ್ನು ಪುನೀತ್ ಎಂದು ಬದಲಾಯಿಸಿದರು. ಹೆಸರು ಬದಲಾಯಿಸಿದ ನಂತರ ದಿನಪತ್ರಿಕೆಯಲ್ಲಿ ಜಾಹೀರಾತನ್ನು ಸಹ ನೀಡಲಾಯಿತು, ಅದರ ನಂತರ ಲೋಹಿತ್ ಪುನೀತ್ ಎಂದು ಬದಲಾದರು. ಆದರೆ ಅಜ್ಜಿ ಇಟ್ಟಂತಹ ಅಪ್ಪು ಎಂಬ ಹೆಸರು ಎಲ್ಲರ ಮನದಲ್ಲಿ ಅಚ್ಚಳಿಯದಂತೆ ಇಂದು ಸಹ ಉಳಿದಿದೆ.  

ಪುನೀತ್ ರಾಜ್‌ಕುಮಾರ್ ಜೀವನಚರಿತ್ರೆ:

ಪುನೀತ್ ರಾಜ್‌ಕುಮಾರ್ ತಂದೆ – ಡಾ.ರಾಜ್‌ಕುಮಾರ್

ಪುನೀತ್ ರಾಜ್‌ಕುಮಾರ್ ತಾಯಿ – ಪಾರ್ವತಮ್ಮ ರಾಜ್‌ಕುಮಾರ್

ಪುನೀತ್ ರಾಜ್ ಕುಮಾರ್ ಸಹೋದರ – ಶಿವ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್

ಪತ್ನಿ – ಅಶ್ವಿನಿ ರೇವನಾಥ್

ಮಕ್ಕಳು – ವಂದಿತಾ, ದೃತಿ

ಜನನ – 17 ಮಾರ್ಚ್ 1975

ಮರಣ –  29 ಅಕ್ಟೋಬರ್ 2021 

ವಯಸ್ಸು –  46 ವರ್ಷ

ಹೃದಯಾಘಾತದಿಂದ ಬಳಲುತ್ತಿದ್ದ ನಟ ಪುನೀತ್ ರಾಜ್‌ಕುಮಾರ್ 29 ಅಕ್ಟೋಬರ್ 2021 ರಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 46 ವರ್ಷ ವಯಸ್ಸಾಗಿತ್ತು. ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ನಟನಿಗೆ ಹೃದಯಾಘಾತವಾಗಿತ್ತು. “ಪ್ರತಿಕ್ರಿಯಿಸದ” ಸ್ಥಿತಿಯೊಂದಿಗೆ, ಅವರನ್ನು ವಿಕ್ರಂ ಆಸ್ಪತ್ರೆಗೆ ಕಳುಹಿಸಲಾಯಿತು. ಅವರ ಸಾವಿನ ನಂತರ, ಅವರ ಅನೇಕ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳು ಆಘಾತಕ್ಕೊಳಗಾಗಿದ್ದಾರೆ ಮತ್ತು ದುಃಖಿತರಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರ ಜೇಮ್ಸ್ ಚಲನಚಿತ್ರ ಪೋಸ್ಟರ್ ಅನ್ನು ಗಣರಾಜ್ಯೋತ್ಸವದ ಮುನ್ನಾದಿನದಂದು 26 ಜನವರಿ 2022 ರಂದು ಬಿಡುಗಡೆ ಮಾಡಲಾಯಿತು.

ಕರ್ನಾಟಕ ರತ್ನ ಪ್ರಶಸ್ತಿ:

ನಮಗೆಲ್ಲ ಒಂದು ಹೆಮ್ಮೆಯ ವಿಷಯವೆಂದರೆ ಡಾ. ರಾಜಕುಮಾರ್ ಅವರ ಕಿರಿಯ ಪುತ್ರ , ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ನವೆಂಬರ್ 1(2022) , ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ, ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದ ಗೌರವಾನ್ವಿತ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.

ಗಂಧದಗುಡಿ:

ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ರವರ ದೊಡ್ಡ ಕನಸು ಗಂಧದಗುಡಿ ಚಿತ್ರವು ಈಗ ಎಲ್ಲ ಕಡೆಯಲ್ಲೂ ಮೆಚ್ಚುಗೆಯನ್ನು ಪಡೆಯುತ್ತಿದೆ. ಅಪ್ಪು ಕಂಡಂತಹ ಈ ಕನಸು ಈಗ ದೃಶ್ಯ ರೂಪವನ್ನು ಪಡೆದು ಎಲ್ಲರ ಕಂಗಳಲ್ಲಿ ಕುಣಿದಾಡುತ್ತಿದೆ. ಪುನೀತ್ ರಾಜಕುಮಾರ್ ಅವರ ಗಂಧದಗುಡಿ ಚಲನಚಿತ್ರ ಅಕ್ಟೋಬರ್ 28ರಂದು ಬಿಡುಗಡೆಯಾಗಿದೆ. ಗಂಧದಗುಡಿ ಚಿತ್ರವು ಎಲ್ಲರಿಗೂ ಮುಟ್ಟಬೇಕು ತಲುಪಬೇಕು ಎನ್ನುವಂತಹ ನಿರೀಕ್ಷೆಯಿಂದ ರವರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಈ ಚಲನಚಿತ್ರವನ್ನು ಮಾಡಿದ್ದಾರೆ. ಒಂದು ರೀತಿಯಲ್ಲಿ ಪುನೀತ್ ರಾಜಕುಮಾರ್ ಅವರು ಗಂಧದಗುಡಿ ಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ರು ಎಂದು ಹೇಳಬಹುದು. 

One thought on “ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಜೀವನಚರಿತ್ರೆ | ಗಂಧದಗುಡಿ

Leave a Reply

Your email address will not be published. Required fields are marked *